ಹಚ್ಚ ಹಸಿರ ನಡುವೆ ಹುಚ್ಚು ಹುಡುಗರ ದಂಡು...
ಬೆರಗಾದರು ಪ್ರಕೃತಿಯ ಸೊಬಗ ಕಂಡು....
ಮನದ ಕಲ್ಮಶವನೆಲ್ಲ ಬದಿಗೆ ಬಿಟ್ಟು....
ಎರಡು ದಿನ ನಿರ್ಮಲತೆಯ ದೀಕ್ಷೆ ತೊಟ್ಟು...
ದಿಟ್ಟ ಹೆಜ್ಜೆಯ ಹಾಕುತ ಮುಂದೆ ನಡೆದೆವು...
'ಅಸ್ವಿನ್ದತಿ' ದರ್ಶನಕೆ ಕಾತುರದಿ ಕಾದೆವು... || ಹಚ್ಚ ಹಸಿರ...||
ಕತ್ತಲಾಗುತ್ತಲೇ ಕೊಂಡದಮ್ಮನ ಮಡಿಲ ಸೇರಿದೆವು...
ಪರಿಚಯ ಪ್ರಶ್ನೋಥರದಿ ಆಡಿ ನಲಿದೆವು...
ಮರದ ಅಡಿಯಲಿ,ಮರೆಯದ ದಿನವ ನೆನೆಯುತ...
ಚಂದ್ರ-ತಾರೆಯರೊಡಗೂಡಿ ಕನಸ ಕಂಡೆವು... || ಹಚ್ಚ ಹಸಿರ...||
ಒಂದೇ ನೋಟದಿ ತುಂಬಲಾರದಷ್ಟು ವಿಶಾಲತೆಯ ಶಿಂಶ ಆವರಿಸಿತ್ತು...
ಜಲಪಾತದ ಭವ್ಯತೆಯ ಸೆರೆಹಿಡಿಯಲು ಕಣ್ಣು ಸೋತಿತ್ತು...
ಬಂಡೆಗಲ್ಲನು ಕೊರೆದು ದುಮ್ಮಿಕ್ಕುವ ಜಲಪಾತ...
'ಬಳಿಗೆ ಬರುವುದಾದರೆ ಬಾ' ಎಂದು ಸವಾಲೆಸೆದಿತ್ತು... || ಹಚ್ಚ ಹಸಿರ...||
ನದಿಯ ದಾಟುತ ಶಿಂಶನ ಸೆಳೆತವ ಸವಿದೆವು...
ದಡದಿ ಕುಳಿತು ತಿಂಡಿ ತಿನಿಸ ಉಂಡೆವು...
ಮರಳು ಹಾದಿಯಲಿ ಮರುಗುತ ಸಾಗಿತು ನಮ್ಮ ಪಯಣ...
ಮರುಗಲ್ಲು ಮಂದಹಾಸ ತಂದಿತು ನದಿ ತೀರದ ಯಾನ... || ಹಚ್ಚ ಹಸಿರ...||
ಶಿಂಶ-ಕಾವೇರಿಯ ಸಂಗಮ ಆನಂದಮಯ...
ಬೆಟ್ಟವ ದಾಟಿದ ಆ ನಡಿಗೆ ಆಹ್ಲಾದಮಯ...
ನಿನ್ನ ಪ್ರತಿಯೊಂದು ವೈಚಿತ್ರ್ಯವ ತುಂಬಿಕೊಂಡೆ ನನ್ನಲಿ...
ನನ್ನ ಮನಸ ನಾ ಬಿಟ್ಟು ಬಂದೆ ಜೀವನದಿ ನಿನ್ನಲಿ... || ಹಚ್ಚ ಹಸಿರ...||
ನಾ ಮುಂದು, ತಾ ಮುಂದು ಎಂದು ನುಗ್ಗುವ ಅಹಂಕಾರದ ಅಲೆ...
ಕೆಲವೊಮ್ಮೆ ಸದ್ದಿಲ್ಲದೇ ಸಾಗುವ ನದಿಯ ಸಹನೆಯ ಸೆಳೆ...
ನಮ್ಮೆಲ್ಲರ ಮನದ ವಿವಿಧ ಪ್ರಕಾರವ ಬಿಚ್ಚಿಟ್ಟಿತ್ತು...
ಭಗವಂತನ ಸೃಷ್ಟಿಯಲ್ಲಿನ ikyatheya ಸಾರಿತ್ತು...|| ಹಚ್ಚ ಹಸಿರ...||
ಮೌನದಿ ಆಲಿಸಿದೆ ಪ್ರಕೃತಿಯ ಒಮ್ಮೆ...
ಕೇಳಿತು ಕಾಣಲಾಗದ ಹಲವಾರು ಚಿಲುಮೆ...
ಮನವ ಮುಟ್ಟಿತು ಹಕ್ಕಿಯ ಜೇಂಕಾರ...
ಮುಗಿಲ ಮುಟ್ಟಿತು ಮನದ ಓಂಕಾರ...|| ಹಚ್ಚ ಹಸಿರ...||
ಅದೆಷ್ಟೋ ರಮ್ಯತೆ ಮಾತೆ ನಿನ್ನ ಮಡಿಲಲಿ...
ಬಣ್ಣಿಸಲಾಗದಷ್ಟು ಕೊರತೆ ನನ್ನ ನುಡಿಯಲಿ...
ಕಾಣುವಷ್ಟು ದೂರ ಕಾಣಬಲ್ಲೆ ಎಲ್ಲೆಲ್ಲು ನಿನ್ನನು...
ಕಾಣುವುದಷ್ಟೇ ಸೊಬಗೇ? ಎಂಬ ಪ್ರಶ್ನೆ ಸದಾ ಕಾಡುವುದು ನನನ್ನು...|| ಹಚ್ಚ ಹಸಿರ...||
ಮನದಾಳದ ಕವನ,
ನಿಮ್ಮ ಪ್ರೀತಿಯ ಕುಸುಮ....
Mana mohaka kavya!!!
ReplyDelete